ಪಾದೇಕಲ್ಲು ವಿಷ್ಣು ಭಟ್ಟ ಇವರು ಕನ್ನಡ ತುಳು ಲೇಖಕರು, ತುಳು ನಿಘಂಟು ರಚನೆಯಲ್ಲಿ ಹಾಗೂ ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ == ಜೀವನ == ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಹುಟ್ಟಿದರು (ಫೆಬ್ರುವರಿ ೧೬ ೧೯೫೬) ಇವರ ತಂದೆ ಶ್ರೀ ಪಾದೇಕಲ್ಲು ನಾರಾಯಣ ಭಟ್ಟ ತಾಯಿ ಶ್ರೀಮತಿ ಶಾರದಾ. ತಮ್ಮ ಪ್ರಾಥಮಿಕ-ಪ್ರೌಢಶಾಲಾ ವಿದ್ಯಾಭ್ಯಾಸಾನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದು (1976) ಮಂಗಳಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದ ಮೂಲಕ ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್ ಗಳಿಸಿದರು (1978). ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು (1997). ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಈಗ ಅವರು ನಿವೃತ್ತರಾಗಿ ಉಡುಪಿಯ ಆತ್ರಾಡಿ ಎನ್ನುವ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. == ಸಾಹಿತ್ಯ == ತುಳುನಿಘಂಟು ಯೋಜನೆಯ ಸಂಪಾದಕರು, ಇವರು ಖ್ಯಾತ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರಿಗೆ ಲಿಪಿಕಾರರಾಗಿ ಸಹಾಯಕರಾಗಿದ್ದುದಲ್ಲದೆ ಅವರ ಹಲವು ಪುಸ್ತಕಗಳನ್ನು ಟಿಪ್ಪಣಿಗಳೊಂದಿಗೆ ಸಂಪಾದಿಸಿದ್ದಾರೆ. ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ == ಕೃತಿಗಳು == == ಪ್ರಶಸ್ತಿ/ಗೌರವಗಳು == ಉಡುಪಿ ಶ್ರೀ ಶೀರೂರು ಮಠದಿಂದ ಶ್ರೀಕೃಷ್ಣನುಗ್ರಹ ಪ್ರಶಸ್ತಿ - 1996 ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನದಲ್ಲಿ ಸಮ್ಮಾನ - 2011 ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್‍ಪ್ರಶಸ್ತಿ - 2014 ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಸೇಡಿಯಾಪು ಪ್ರಶಸ್ತಿ - 2015 ಶೃಂಗೇರಿ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ವರ್ಧಂತ್ಯುತ್ಸವ ವಿದ್ವತ್ ಸಮ್ಮಾನ - 2015 ಉಡುಪಿ ಶ್ರೀ ಪೇಜಾವರ ಮಠದಿಂದ ರಾಮವಿಠಲ ಪ್ರಶಸ್ತಿ - 2016 ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ `ಯಕ್ಷಗಾನಾಧ್ಯಯನ’ ಕೃತಿಗೆ - 2017 ಕಾಂತಾವರ ಕನ್ನಡ ಸಂಘದ `ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ `ಪಂಡಿತ ಪರಂಪರೆಯ ಪಾದೇಕಲ್ಲು ವಿಷ್ಣು ಭಟ್ಟ’ ಎಂಬ ಕೃತಿ ಬಿಡುಗಡೆಯಾಗಿದೆ. ಲೇಖಕರು - ಡಾ. ಎಸ್. ಅರ್. ಅರುಣಕುಮಾರ್ – 2018 ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ - 2018 ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ವಿದ್ವತ್‍ಪ್ರಶಸ್ತಿ - 2018 == ಉಲ್ಲೇಖ ==